ಅತೀತರು

ಎಲ್ಲ ಸಾಮಾಜಿಕ ಭೇದಗಳನ್ನೂ ತೊರೆದ ಶೈವ, ವೈಷ್ಣವ ಸಂನ್ಯಾಸಿಗಳು; ಶಂಕರಾಚಾರ್ಯರಿಂದ ಉಪದೇಶ ಪಡೆದ ಹತ್ತು ಗುಂಪಿನವರು (ದಶನಾಮಾ). ಇವರಲ್ಲಿ ದಂಡಿಗಳೆಂಬುವರು ಶಂಕರಾಚಾರ್ಯರ ಶುದ್ಧತತ್ತ್ವವನ್ನು ಅನುಸರಿಸುತ್ತಾರೆ. ವನ, ಅರಣ್ಯ, ಪುರ, ಗಿರಿ, ಪರ್ವತ, ಸಾಗರ, ಭಾರತಿಗಳು ಅದಂಡಿಗಳು, ಮೊದಲಿನವರಂತೆ ಶುದ್ಧರಲ್ಲ. 
(ನೋಡಿ- ಅವಧೂತ)   										
(ಜಿ.ಎಚ್.)